skip to main |
skip to sidebar

ಅಂದು ನೀ ಹುಟ್ಟಿದ ದಿನ ಮನೆಯಲ್ಲೆಲ್ಲ ನಲಿದ
ಇಂದು ವರುಷವಾಗುತ ನೀ ತುಂಬುತಿಹೆ ಎಲ್ಲರ ಮನ
ಭುವಿಗೆ ಬಂದಂದಿನಿಂದ ಮನೆಯಾಯಿತು ಪಾವನ ಪುನೀತ
ನೀನೀಗ ತಯಾರಾಗಿಹೆ ಕದಿಯಲಾ ನವನೀತ
ಅಂದು ಮನಕಾನಂದ ನೀ ಬೋರಲು ಬೀಳಲು
ಮುಂಬರಲು ದೇಕಲಾಗದೇ ಅಮ್ಮನಲಿ ಅಳಲು
ಇಂದು ನೀ ಹಿಡಿದಿಹೆ ಕರದಲಿ ಕೃಷ್ಣನಾ ಕೊಳಲು
ವಂಶದ ಆಲದ ಮರದಿ ಬೇರೂರುತಿದೆ ಇನ್ನೊಂದು ಬಿಳಲು
ಮನೆಯಲ್ಲೆಲ್ಲಾ ಇಡುತಿಹೆ ಪುಟ್ಟ ಪುಟ್ಟ ಹೆಜ್ಜೆ
ಇಂದು ತೆಗೆಯುವವರು ಅಂದು ಹಾಕಿದಾ ಗೆಜ್ಜೆ
ಇನ್ನು ತಡೆಯಲಾರರು ನಿನ್ನ ತುಂಟಾಟ
ಕೆಲವೊಮ್ಮೆ ನೀ ಬಾಯಿ ಬಿಟ್ಟರೆ ಎಲ್ಲರಿಗೂ ಪ್ರಾಣಸಂಕಟ
ಪರಶಿವನು ಎಂದಿಗೂ ನಿನ್ನ ಕಾಯುವ
ಉಚ್ಛ ಏಳಿಗೆಗಾಗಿ ನಾವೆಲ್ಲ ಇಂದು ಬೇಡುವ
ಆಯುರಾರೋಗ್ಯ ಅಭಿವೃದ್ಧಿ ಜೊತೆಗೆ ಶ್ರೇಯಸ್ಸು
ಶ್ರೀಹರಿಯ ಕರುಣೆಯಿಂದ ನಿನಗಿರಲಿ ದೀರ್ಘಾಯಸ್ಸು
ಮತ್ತೆ ಬ್ಲಾಗಿನ ಬಾಗಿಲನ್ನು ತೆರೆಯುತ್ತಿರುವೆ. ಮೊದಲು ಹಳೆಯ ಸರಕನ್ನು ಏರಿಸಿ, ನಂತರ ಹೊಸ ಸರಕನ್ನು ತುಂಬಿಸುವೆ am opening the blog door again. first, i would upload the old stock, later on the new stock would arrive :)ಅಕ್ಕ
ಬಾರೋ ತಮ್ಮ ಏರಿ ಏರಿ ಹೋಗುವಾ
ಏರಿ ಇಳಿದು ನೀರ ಕಡೆಗೆ ಸಾಗುವಾ
ನೀರಲಿಳಿದು ದೋಣಿಗಿಳಿದು
ತೇಲಿ ತೇಲಿ ಹೋಗುವಾ
ಮನೆಯಲಾರಿಗೂ ಹೇಳಬೇಡ
ನೀರಗಿಳಿದು ಮುತ್ತು ತರುವ ಬಾರ
ಕಾಣದೂರಿಗೆ ಹೋಗಿ ಬರುವ
ಕ್ಷಣ ಕಾಲ ಜಗವ ಮರೆವ ಬಾರ
ತಮ್ಮ
ಬೇಡಾಕ್ಕ ಬೇಡ
ಯಾರಿಗೂ ಹೇಳದೇ ಹೋಗುವುದು ಬೇಡ
ನೀರಿಗಿಳಿಯುವುದು ಬೇಡ
ಜಗವ ಮರೆಯುವುದು ಬೇಡ
ನಾ ಅಮ್ಮನ ಬಿಡುಲಾರೆ
ಅಪ್ಪನ ಬಿರುಗಣ್ಣಿಗೆ ತುತ್ತಾಗಲಾರೆ
ನಿನ್ನನೂ ನಾ ಬಿಡಲಾರೆ
ಇಬ್ಬರೂ ಹೋಗುವುದು ಬೇಡ
ಅಕ್ಕ
ಬೆಳೆಯೋ ಕಂದಾ!
ಎತ್ತರಕೆ ಬೆಳೆ
ಆಲದ ಮರದಂತೆ ಬೆಳೆ
ಜಗವ ನೋಡು
ಅತ್ತಿತ್ತ ಓಡು
ಅದೋ ಕರೆಯುತ್ತಿದೆ ಕಾಡು
ಒಮ್ಮೆಯಾದರೂ ಅಲ್ಲಿ ಬಿಡೋಣ ಬೀಡು
ಅವುಚಿದ ಮೈ ಕೈ ಝಾಡಿಸು
ಹೆದರಿಕೆಯ ಹೋಗಲಾಡಿಸು
ಅಪ್ಪನಂತೆ ನೀ ಎತ್ತರಕೆ ಬೆಳೆ
ತಮ್ಮ
ಯಾಕೋ ಹೆದರಿಕೆಯಾಗುತಿದೆ
ನಿನ್ನ ಮೇಲಿನ ನಂಬಿಕೆ ಮಾಯವಾಗುತ್ತಿದೆ
ಸಂಜೆಯೂಟವ ಕೊಡುವವರಾರೆ
ಪುಸ್ತಕ ಬಳಪ ಕೊಡಿಸುವವರಾರೆ
ಪಾಠವ ಹೇಳಿಕೊಡುವವರಾರೆ
ನಿದ್ರೆ ಬರಲು ಹೊದಿಸುವವರಾರೆ
ಬೇಡಕ್ಕಾ ಬೇಡ
ನೀನೂ ಹೋಗಬೇಡ
ನನ್ನ ಜೊತೆ ಎಂದಿಗೂ ನೀನಿರು
ನಾವೆಲ್ಲಿಗೂ ಹೋಗುವುದು ಬೇಡ