Saturday, August 1, 2009

ಶ್ರೇಯಸ್ಸು




ಅಂದು ನೀ ಹುಟ್ಟಿದ ದಿನ ಮನೆಯಲ್ಲೆಲ್ಲ ನಲಿದ
ಇಂದು ವರುಷವಾಗುತ ನೀ ತುಂಬುತಿಹೆ ಎಲ್ಲರ ಮನ
ಭುವಿಗೆ ಬಂದಂದಿನಿಂದ ಮನೆಯಾಯಿತು ಪಾವನ ಪುನೀತ
ನೀನೀಗ ತಯಾರಾಗಿಹೆ ಕದಿಯಲಾ ನವನೀತ


ಅಂದು ಮನಕಾನಂದ ನೀ ಬೋರಲು ಬೀಳಲು
ಮುಂಬರಲು ದೇಕಲಾಗದೇ ಅಮ್ಮನಲಿ ಅಳಲು

ಇಂದು ನೀ ಹಿಡಿದಿಹೆ ಕರದಲಿ ಕೃಷ್ಣನಾ ಕೊಳಲು
ವಂಶದ ಆಲದ ಮರದಿ ಬೇರೂರುತಿದೆ ಇನ್ನೊಂದು ಬಿಳಲು


ಮನೆಯಲ್ಲೆಲ್ಲಾ ಇಡುತಿಹೆ ಪುಟ್ಟ ಪುಟ್ಟ ಹೆಜ್ಜೆ
ಇಂದು ತೆಗೆಯುವವರು ಅಂದು ಹಾಕಿದಾ ಗೆಜ್ಜೆ
ಇನ್ನು ತಡೆಯಲಾರರು ನಿನ್ನ ತುಂಟಾಟ
ಕೆಲವೊಮ್ಮೆ ನೀ ಬಾಯಿ ಬಿಟ್ಟರೆ ಎಲ್ಲರಿಗೂ ಪ್ರಾಣಸಂಕಟ


ಪರಶಿವನು ಎಂದಿಗೂ ನಿನ್ನ ಕಾಯುವ
ಉಚ್ಛ ಏಳಿಗೆಗಾಗಿ ನಾವೆಲ್ಲ ಇಂದು ಬೇಡುವ
ಆಯುರಾರೋಗ್ಯ ಅಭಿವೃದ್ಧಿ ಜೊತೆಗೆ ಶ್ರೇಯಸ್ಸು

ಶ್ರೀಹರಿಯ ಕರುಣೆಯಿಂದ ನಿನಗಿರಲಿ ದೀರ್ಘಾಯಸ್ಸು

7 comments:

  1. ಸುಂದರ ಕವನದ ಮೂಲಕ ಮಗುವನ್ನು ಹಾರೈಸಿದ್ದೀರಿ. ಅಷ್ಟೇ ಸುಂದರ ಮುದ್ದಾದ ಮಗುವಿನ ಚಿತ್ರ ಇಷ್ಟವಾಯಿತು. ನನ್ನ ಕಡೆಯಿಂದಲೂ ಹಾರೈಕೆಗಳು.

    ReplyDelete
  2. nannadoo ondu haaraike nimma maguvige haagu nimma kavitege:)

    ReplyDelete
  3. magu nannadalla gautam! avanu nanna mommaga (magaLa maga) :)

    hRutpoorvaka maatugaLige vaMdanegaLu

    ReplyDelete
  4. ಮಕ್ಕಳು ಏನೇ ಮಾಡಿದರು ಚಂದ...
    ನಿಮ್ಮ ಕವನ ತುಂಬಾ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  5. ನಮಸ್ಕಾರ ಸರ್
    ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ.
    ಪುಟ್ಟ ಮಗುವಿನ ಬಗ್ಗೆ ಸೊಗಸಾಗಿ ವರ್ಣಿಸಿದ್ದೀರಿ..ನಿಮ್ಮ ಮೊಮ್ಮಗನಿಗೆ ಆಯುರ್-ಆರೋಗ್ಯ ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ...ಮಕ್ಕಳೇ ನಮ್ಮ ಅಸ್ತಿ ಅಲ್ವ

    ReplyDelete
  6. great poem on one year old child. Every house should have an one year old child. it is only a wish. the house will be full of laughter etc

    ReplyDelete